About The Team/ Organiser
Vatikuteera is a vernacular repertory that aims at celebrating theatre and great playwrights. Established in 2007, this is a platform for distinguished talent and steadfast commitment to theatre. So far, Vatikuteera has staged the following plays to name a few. ‘Suryana Kudure’, ‘No presents please’, ‘True India’, “Mayamruga”, Shakespear’s “Romeo and Juliot” (Kannada), Koriyappana Koriography”, “Panigrahana”
ವಂಶವೃಕ್ಷ - 21st August 2022 : 11.30 AM @ Viveka Sabhangana
₹250
Event Synopsis
ಭೈರಪ್ಪನವರ ಕಾದಂಬರಿ “ವಂಶವೃಕ್ಷ” ರಂಗರೂಪಕದ ವಸ್ತು ಶೀರ್ಷಿಕೆಯೇ ಹೇಳುವಂತೆ ಒಂದು ವಂಶದ ತಲೆಮಾರುಗಳು ತಮ್ಮ ಬದುಕಿನ ಸುತ್ತ ವಿಕಾಸಗೊಳ್ಳುವ ಜೀವನ ವಿಧಾನಗಳು, ತಾವು ಆರೋಪಿಸಿಕೊಂಡ ಮೇಲ್ಮೆಗಳು, ಎದುರಾಗುವ ಸವಾಲುಗಳು, ಅದಕ್ಕೆ ವಿವಿಧ ಪಾತ್ರಗಳು ಒದಗಿಸಿಕೊಡುವ ಸ್ಫಂಧನೆಗಳು. ನಾಟಕದ ಕೇಂದ್ರಬಿಂದು ಶ್ರೀನಿವಾಸ ಶ್ರೋತ್ರಿಗಳು. ಅತ್ಯಂತ ಸಂಪ್ರದಾಯಸ್ಥ ಮನೆತನದ ಹಿರಿತಲೆಯಾಗಿ, ಸಂಪ್ರದಾಯ, ಆಚಾರ, ವ್ಯವಹಾರ ಮತ್ತು ಜ್ಞಾನ ಸಂಪತ್ತಿನಲ್ಲಿ ಶ್ರೀಮಂತರು. ತಂದೆ ಮಾಡಿಟ್ಟಿದ್ದ ಆಸ್ತಿಯನ್ನು ಸದ್ವನಿಯೋಗ ಮಾಡುತ್ತಾ ಅತ್ಯಂತ ಉದಾರವಾಗಿ ವಸ್ತುನಿಷ್ಠವಾಗಿ ಯೋಚಿಸಬಲ್ಲ ವ್ಯಕ್ತಿತ್ವ. ಅವರಿಗೆ ಸಮನಾಗಿ ನಿಲ್ಲುವ ವ್ಯಕ್ತಿತ್ವ ತಂದೆಯ ಕಾಲದಿಂದಲೂ ಅದೇ ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ಲಕ್ಷ್ಮಿ.
ಸದಾ ಮೌಲ್ಯಗಳು ಮತ್ತು ವಾಸ್ತವ ಬದುಕಿನ ನಡುವೆ ಸಂಘರ್ಷಗಳು ನಡೆಯುತ್ತಾ ಸಾಗಿದಂತೆ ಅದಕ್ಕೆ ಪಾತ್ರಗಳು ಸ್ಪಂದಿಸುವ ರೀತಿಯು ಆ ಪಾತ್ರದ ಮೌಲ್ಯಗಳನ್ನು ಕಟ್ಟಿಕೊಡುತ್ತದೆ.
ಒಂದೆಡೆ ಶ್ರೀನಿವಾಸ ಶ್ರೋತ್ರಿಯರ ವಸ್ತುನಿಷ್ಠವಾದ ಜೀವನ ವಾದರೆ, ಮತ್ತೊಂದೆಡೆ ಸದಾಶಿವರಾಯರು ವಿಧ್ವಾಂಸರು ಸಾಕಷ್ಟು ಕಲಿತು ಕಾಲೇಜಿನ ಉಪನ್ಯಾಸಕರು. ಅವರ ಜೀವನ ಹಾಗೂ ಶ್ರೀನಿವಾಸ ಶ್ರೋತ್ರಿಯರ ಜೀವನದ ಮೌಲಿಕವಾಗಿ ಸಮತೂಗಿಸಿಕೊಂಡು ಹೋಗುತ್ತದೆ ಈ ರಂಗಪ್ರಯೋಗ.
ಶ್ರೀನಿವಾಸ ಶ್ರೋತ್ರಿಯರ ಸೊಸೆಯಾದ ಕಾತ್ಯಾಯಿನಿಯ ಜೀವನದಲ್ಲಿ ಹತಾಶೆ ನೋವುಗಳ ನಡುವೆಯೂ ಒಂದು ಜೀವನೋತ್ಸಾಹ ತುಂಬಿರುವಂತಹುದು. ಮಗ ಚೀನಿಯನ್ನು ಬಿಟ್ಟು ಬಂದು ಹೊಸ ಜೀವನ ಪ್ರಾರಂಭಿಸುವ ಆಕೆ. ವಂಶವೃಕ್ಷದಲ್ಲಿ ಬೀಜ ಮತ್ತು ಕ್ಷೇತ್ರದ ನಡುವಣ ಸಂಘರ್ಷ ಕಾಣುವುದೇ ಆಕೆ ಮರು ಮದುವೆಯಾಗಿ ಹೋದ ನಂತರ. ಇದೇ ಈ ನಾಟಕದ ಮುಖ್ಯ ಭಾಗವಾಗಿದೆ.
Event Details
Start time: 11:30 a.m. IST
Venue: Viveka Sabhangana
Directions: (behind BHS first grade college), 4th T Block, Jayanagar, Bengaluru - 560070
Phone: 9880695659
Email: [email protected]