sabhankosh.co

(ಅ)ದೃಶ್ಯಂ - 15th August 2022 : 3.30 PM @ Prabhath KH Kalasoudha

200

Event Synopsis
(ಅ)ದೃಶ್ಯಂ
ಭಾರತ- ಭಾರತಭೂಮಿ- ಪುಣ್ಯಭೂಮಿ-ಕರ್ಮಭೂಮಿ, ಭಗವಂತನ ಅವತಾರಗಳು ಸಂಭವಿಸಿದ, ರಾಮಾಯಣ-ಮಹಾಭಾರತಗಳು ಘಟಿಸಿದ- ಸಂತ- ಮಹಂತರು ಹುಟ್ಟಿದ- ರಾಮ – ಕೃಷ್ಣರು ನಡೆದಾಡಿದ ಧನ್ಯತೆಯ ಭೂಮಿ.
ಭರತ ನಿಂದ ಭಾರತವಾದರೂ, ಆಕೆಯನ್ನು ಭಾರತಿ ಎಂದೇ ನಾವು ಕರೆಯುವುದು. ಆಕೆ ನಮ್ಮ ಜನುಮದಾತೆ.ಈ ಮಣ್ಣು, ಪರಿಸರ,ನದಿ,ಬೆಟ್ಟಗಳನ್ನು ಸ್ತ್ರೀ ಪ್ರತೀಕವೆಂದು ಭಾವಿಸಿ ಪೂಜಿಸುತ್ತಿರುವ ನಮಗೆ ಹೆಣ್ಣು ಎಲ್ಲವೂ ಆಗಿದ್ದಾಳೆ. ದುರ್ಗೆ-ಸರಸ್ವತಿ-ಲಕ್ಷ್ಮೀ ಅನ್ನಪೂರ್ಣೆ, ಶಕ್ತಿ, ಯುಕ್ತಿ ಎಲ್ಲವೂ ಅವಳೇ ಹೆಣ್ಣಿಗೆ ಭಾರತದಲ್ಲಿ ಪೂಜ್ಯ ಸ್ಥಾನವಿದೆ.
ಪುರಾಣಗಳ ರಾಮಾಯಣ-ಮಹಾಭಾರತದ ಸ್ತ್ರೀ ಪಾತ್ರಗಳು ತ್ಯಾಗ ಮತ್ತು ಪರಮಸಹಿಷ್ಣುವಿನ ಉದಾಹರಣೆಗಳಾಗಿವೆ. ಕ್ಷಮಯಾ ಧರಿತ್ರಿಯ ಪ್ರತಿರೂಪ ಈ ಪಾತ್ರಗಳು. ಅಂತಹ ಪ್ರಾಥಃ ಸ್ಮರಣಿಯ ಸ್ತ್ರೀ ಪಾತ್ರಗಳ ಆಂತರಿಕ ತೊಳಲಾಟದ ಅನಾವರಣವೇ ಅ(ದೃಶ್ಯಂ).
ರಾಮಾಯಣದ ಮಂಥರೆ, ಶಬರಿ, ಸೀತೆ, ಮಹಾಭಾರತದ ದ್ರೌಪದಿ, ಪುರಾಣದ ಯಲ್ಲಮ್ಮ, ಮಹಾಕಾವ್ಯಗಳ ಚಂದ್ರಮತಿ, ಅಹಲ್ಯೆ, ಗುಣಾಸಾಗರಿ, ಸಾವಿತ್ರಿ, ಇವರೆಲ್ಲರೂ ಮಹಾತ್ಯಾಗದ ಮಹಾಮೂರ್ತಿಗಳು.ಇವರ ಘನತೆ ಮತ್ತು ಶ್ರೇಷ್ಠತೆಯನ್ನು ನಾಟಕದಲ್ಲಿ ಚರ್ಚಿಸಲಾಗುತ್ತದೆ.
ರಂಗಭೂಮಿಯ ಅನುಭವೀ ಕಲಾವಿದರಾದ ಶ್ರೀಮತಿ ಮಂಜುಳಾ ಹಾಗೂ
ಶ್ರೀ ನಾರಾಯಣ ಭಟ್ ಅವರಿಗಾಗಿಯೇ ಸಿದ್ದಪಡಿಸಿದ ಹೊಸ ನಾಟಕ ಇದು. ಮೂಲತಃ ರಂಗಭೂಮಿ ಕಲಾವಿದರಾದ ಈ ದಂಪತಿಗಳು ಜಾದೂ ವಿದ್ಯೆಯನ್ನು ಬಲ್ಲವರಾಗಿರುವುದರಿಂದ, ಈ ನಾಟಕದಲ್ಲಿ ಹಲವು ಜಾದೂ ತಂತ್ರಗಳನ್ನು ಬಳಸಲಾಗಿದೆ.
ಆದ್ದರಿಂದ ಇದು ಅಭಿನಯ ಹಾಗೂ ಅಭಿಚಾರದ ಜುಗಲ್ಬಂದಿ ಮತ್ತು ಪತಿ ಪತ್ನಿಯರ
ಜಿದ್ದಾ-ಜಿದ್ದಿ
ಭಾರತದ ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವಕ್ಕಾಗಿ ಪ್ರದರ್ಶಿತವಾಗುತ್ತಿರುವ ಈ ಪ್ರದರ್ಶನ, ಭಾರತದ ಮಣ್ಣಿನ ಭವ್ಯತೆಯನ್ನು ಸಾರುತ್ತದೆ.

Category:

About The Team/ Organiser
ಯು.ಕೆ.ಆರ್ಟ್ಸ್ ಮತ್ತು ಕಲ್ಚರಲ್ ಟ್ರಸ್ಟ್ ಕಲಾ ದಂಪತಿಗಳು ಪ್ರಾರಂಭಿಸಿದ ಸಾಮಾಜಿಕ ಜಾಗೃತಿ, ಕಲೆ ಹಾಗೂ ಸಾಂಸ್ಕೃತಿಕ ಸಂಸ್ಥೆ. ರಂಗಭೂಮಿ ಮತ್ತು ಜಾದೂ ವಿದ್ಯೆಯನ್ನು ಬಳಸಿಕೊಂಡು ಜನಜಾಗೃತಿಯನ್ನು ಮೂಡುಸುವ ಕೆಲಸಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಆಶ್ರಯ ರಹಿತ ಮಕ್ಕಳಿಗಾಗಿ ರಂಗ ತರಬೇತಿ ಶಿಬಿರ ಹಾಗು ನಾಟಕ ಪ್ರದರ್ಶನ. ಸರ್ಕಾರಿ ಶಾಲಾ ಮಕ್ಕಳಿಗಾಗಿ ರಂಗ ಕಮ್ಮಟ ಹಾಗೂ ನಾಟಕ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿದೆ. ಬಿಜಾಪುರ ಜಿಲ್ಲೆಯಲ್ಲಿ ನಗರ-ಗ್ರಾಮಿಣ ಹಾಗೂ ವಸತಿ ಶಾಲಾಯ ಸರಿಸುಮಾರು 35.000 ಸಾವಿರ ವಿದ್ಯಾರ್ಥಗಳಿಗೆ ಜ್ಞಾನ-ವಿಜ್ಞಾನ-ಮನರಂಜನೆ ಮಾಲಿಕೆಯಲ್ಲಿ ಮೌಢ್ಯ ಹಾಗೂ ಕಂದಾಚಾರಗಳ ವಿರುದ್ದ ಜನಜಾಗೃತಿಯ ಪ್ರದರ್ಶವನ್ನು ಮಾಡಿದೆ. ಜಾದೂ ವಿದ್ಯೆಯನ್ನು ರಂಗಭೂಮಿಯಲ್ಲಿ ಹದವಾಗಿ ಬಳಸಿ, ಪ್ರಯೋಗಿಸುತ್ತಿರುವ ಈ ಜೋಡಿ ಇದನ್ನೇ ನಂಬಿ-ಇದನ್ನೇ ವೃತಿ-ಪ್ರವೃತ್ತಿಯನ್ನಾಗಿ ಬಳಸಿಕೊಂಡು ಬದುಕು ನಿರ್ವಹಿಸುತ್ತಿರುವ ರಂಗನಿಷ್ಠ ಸತಿ-ಪತಿಗಳು.

About the Director
ರಂಗ ಬ್ರಹ್ಮ ಡಾ. ಎಸ್.ಎಲ್.ಎನ್ ಸ್ವಾಮಿ (ಅ)ದೃಶ್ಯಂ- ನಾಟಕ ರಂಗಬ್ರಹ್ಮ ಡಾ. ಎಸ್.ಎಲ್.ಎನ್ ಸ್ವಾಮಿ ಯವರ ಕಲ್ಪನೆಯ ಕೂಸು. ರಂಗಭೂಮಿ ಹಾಗೂ ಮಾಧ್ಯಮದ ಹಿರಿಯ ಅನುಭವಿ ಡಾ. ಸ್ವಾಮಿ. ನಾಟಕ ಕರ್ತೃ, ನಟ, ನಿರ್ದೇಶಕ, ರಂಗ ಸಂಘಟಕ, ಹಾಗೂ ಪ್ರಸಿದ್ಧ ರಂಗ ವಿಮರ್ಶಕ ಸ್ವಾಮಿ. ಮನರಂಜನಾ ವಾಹಿನಿಗಳ ಕಾರ್ಯಕ್ರಮಗಳ ರುವಾರಿ ಉನ್ನತ ರಂಗ ಶಿಕ್ಷಣ –ರಂಗಭೂಮಿ ಅಧ್ಯಯನದ ಸ್ವಾಮಿ. ಸಾವಿರಾರು ಪುಟಗಳ ಸಾಹಿತ್ಯವನ್ನು ರಚಿಸಿದ್ದಾರೆ. ಸಂಪೂರ್ಣ ರಾಮಾಯಣ-ಮಹಾಭಾರತ, ಉಪನಿಷತ್ತು, ಬ್ರಹ್ಮ ಸೂತ್ರ, ಭಗವದ್ಗೀತೆಗಳನ್ನು ಕುರಿತ ರಂಗ ನಾಟಕಗಳನ್ನು ವಿರಚಿಸಿದ್ದಾರೆ. ಮೂರು ಸಾವಿರ ಬೀದಿನಾಟಕಗಳನ್ನು ಪ್ರದರ್ಶಿಸಿದ್ದಾರೆ, ಪ್ರಪಂಚದ ಅತಿ ಚಿಕ್ಕನಾಟಕ, ಅತಿ ದೊಡ್ಡ ನಾಟಕ, ಬೃಹತ್ ಮಹಿಳಾ ಏಕವ್ಯಕ್ತಿ ನಾಟಕ, ಬೃಹತ್ ಪುರುಷ ಏಕವ್ಯಕ್ತಿ ನಾಟಕ, ಮುಂತಾದ 16 ಹೊಸ ದಾಖಲೆಗಳ ನಿರ್ಮಾತೃ ಸ್ವಾಮಿ. ಮಹಾತ್ಮನ ಮನದ ಮಾತು, ಸಾರಥ್ಯ, ವಿಶ್ವರೂಪಂ, ಅದ್ವೈತ, ಜನಕಜಾತೆ ಜಾನಕಿ, ದಶಾನನ, ನನ್ನೊಳಗಿನ ನಾನು, ಕುದಿಮೌನ, ಕೆಂಡದ ಕುಸುಮಗಳು, ಕೈಕಸಿ ಕಥನ, ಗೋಡ್ಸೆ, ಶಿವಾಜಿ, ಮರಣಮುನ್ನುಡಿ, ಸಾವರ್ಕರ್, ಪದ್ಮಾವತಿ ಪರಿಣಯ, ಕನಕದಾಸ, ಪುರುಷೋತ್ತಮ ಪರ್ವ, ಕರ್ಣ, ಹೆತ್ತು ಕೊಡುವ ಹೊತ್ತು. ಸಾಕ್ಷಾತ್ಕಾರ, ಬೆತ್ತಲೆ ಬಯಲು, ಮುಂತಾದವು ಇವರ ಪ್ರಸಿದ್ಧ ನಾಟಕಗಳು, ಮಹಿಳಾ ಚಳವಳಿ, ಜನಪರ ಚಳವಳಿಯ ಹಿನ್ನೆಲೆಯಲ್ಲಿ ಬಂದಿರುವ ಸ್ವಾಮಿ ಅಸಮಾನತೆ, ಅನ್ಯಾಯ, ಶೋಷಣೆಯ ವಿರುದ್ಧ ಧ್ವನಿ ಎತ್ತುವ ಸಮರ್ಥ ರಂಗ ಕರ್ಮಿ, ಅಭ

Event Details

Start time: 03:30 p.m. IST

Venue: Prabhath KH Kalasoudha

Directions: Hanumanthanagar

Phone: 9449637356 / 7975272322

Email: [email protected]

Shopping Cart